ದೇವರ ಆತ್ಮ (ಪವಿತ್ರಾತ್ಮನು)

“ಫರೋಹನು ತನ್ನ ಪರಿವಾರದವರಿಗೆ -ಈತನಲ್ಲಿ ದೇವರ ಆತ್ಮ ಉಂಟಲ್ಲಾ; ಈತನಿಗಿಂತ ಯೋಗ್ಯನಾದ ಪುರುಷನು ನಮಗೆ ಸಿಕ್ಕಾನೇ ಎಂದು ಹೇಳಿ…” (ಆದಿ.41:38).

 ಇದು ಪವಿತ್ರಾತ್ಮನ ಯುಗವಾಗಿದೆ. ಎಲ್ಲಾ ಮನುಷ್ಯರ ಮೇಲೂ ಆತನು ಸುರಿಯಲ್ಪಡುತ್ತಿದ್ದಾನೆ. ಆತ್ಮನ ವರಗಳನ್ನು ಕೊಡುತ್ತಿದ್ದಾನೆ. ಆತ್ಮನ ಫಲಗಳನ್ನು ಕೊಟ್ಟು ಕ್ರಿಸ್ತನ ಸ್ವಭಾವದಲ್ಲಿ ನಮ್ಮನ್ನು ಸಂಪೂರ್ಣರಾಗಿಸುತ್ತಿದ್ದಾರೆ. ಈಗ ನಾವು ಹಿಂಗಾರಿನ ಮಳೆಯ ದಿವಸದಲ್ಲಿ ಬಂದಿದ್ದೇವೆ. ತಂದೆಯಾದ ದೇವರು ಪರಲೋಕದಲ್ಲಿದ್ದಾನೆ. ಕ್ರಿಸ್ತನು ಮಹಿಮೆಯ ನಂಬಿಕೆಯಾಗಿ ನಿಮ್ಮೊಳಗೆ ವಾಸವಾಗಿದ್ದಾನೆ. ಮುಂಚೆ ಪರಲೋಕದಲ್ಲಿ ಏಳು ಅಗ್ನಿದೀಪಗಳಾಗಿ, ಸಿಂಹಾಸನದ ಮುಂದೆ ಉರಿಯುತ್ತಿದ್ದ ಏಳು ಆತ್ಮನ ದೀಪಗಳೂ, ಇಂದು ನಿಮ್ಮೊಳಗಿದೆ. ಪವಿತ್ರಾತ್ಮನು ನಿಮ್ಮನ್ನು ಆತನ ಆಲಯವಾಗಿಸಿ, ನಿಮ್ಮಲ್ಲಿ ಆತನು ವಾಸವಾಗಿದ್ದಾನೆ. ಅಭಿಷೇಕದಿಂದ ದೇವಾದಿದೇವನಾದ ಕರ್ತನು ನಿಮ್ಮನ್ನು ವಿಶೇಷವುಳ್ಳವರಾಗಿ ಮಾರ್ಪಡಿಸಿದ್ದಾನೆ. ಆತನು ಯೋಸೇಫನಿಗೆ ಸ್ವಪ್ನಗಳನ್ನು ದರ್ಶನಗಳನ್ನು ನೋಡುವಂತಹ ವರವನ್ನು ಕೊಟ್ಟನು. ಬರಗಾಲವು ಯಾವಾಗ ಬರುವದು? ಜನರು ಕ್ಷಾಮದಿಂದ ಬಾಧಿಸಲ್ಪಡದಂತೆ ಏನು ಮಾಡಬೇಕು ಎಂಬ ತನ್ನ ಯೋಚನೆಗಳನ್ನು ಹೇಳಿದಾಗ, ಅದನ್ನು ಕೇಳಿದ ಫರೋಹನು ಬಹಳ ಆಶ್ಚರ್ಯಪಟ್ಟನು.

ತನ್ನ ದೇಶದಲ್ಲಿ ಸಾವಿರಾರು ಮಂತ್ರವಾದಿಗಳೂ, ಜ್ಯೋತಿಷ್ಯರೂ ಇದ್ದರೂ ಸಹ, “ದೇವರಾತ್ಮನನ್ನು ಹೊಂದಿರುವ ಯೋಸೇಫನ ಹಾಗೆ ಯಾರೂ ಇಲ್ಲ” ಎಂದು ಸಾಕ್ಷಿಯಾಗಿ ಹೇಳಿದನು.

ಕೆಲವು ರಾಜ್ಯಗಳಲ್ಲಿ ಜಲಪ್ರವಾಹ ಬಂದು ರಾಜ್ಯಗಳು ಬಾಧಿಸಲ್ಪಡುವಾಗ ಆ ರಾಜ್ಯದ ಮುಖ್ಯಮಂತ್ರಿಗಳು, ಯೋಸೇಫನ ಹಾಗೆ ದರ್ಶನಗಳನ್ನೂ, ಸ್ವಪ್ನಗಳನ್ನೂ ಕಂಡು ದೇಶವನ್ನು ಸಂರಕ್ಷಿಸಲಿಲ್ಲವಲ್ಲಾ ಎಂಬ ಭಾವನೆಯು ನನಗೆ ಬರುವದುಂಟು. ಈ ವರವು ದೇಶದ ಸರ್ಕಾರಕ್ಕೆ ಮಾತ್ರವಲ್ಲ, ಕುಟುಂಬಕ್ಕೂ ಪ್ರಯೋಜನಕರ. ಇದರಿಂದ ಬರಲಿರುವ ಆಪತ್ತನ್ನು ತಡೆಗಟ್ಟಬಹುದು. ಯೋಸೇಫನಲ್ಲಿದ್ದ ಎಲ್ಲಾ ವರಗಳೂ ದಾನಿಯೇಲನಲ್ಲಿಯೂ ಇತ್ತು. ಐಗುಪ್ತದಲ್ಲಿ ಫರೋಹನಿದ್ದ ಹಾಗೆ, ಬಾಬೇಲ್ ದೇಶದಲ್ಲಿ, ನೆಬೂಕದ್ನೆಚ್ಚರನಿದ್ದನು. ಆ ಅರಸನು ಒಂದು ಕನಸನ್ನು ಕಂಡು ಹೃದಯದಲ್ಲಿ ಕಳವಳಗೊಂಡನು. ಆ ಕನಸನ್ನೂ, ಅದರ ಅರ್ಥವನ್ನೂ ಹೇಳಬೇಕೆಂದು ತನ್ನ ದೇಶದಲ್ಲಿರುವ ಎಲ್ಲಾ ಜ್ಞಾನಿಗಳನ್ನೂ ಕೇಳಿಕೊಂಡಾಗ, ಅವರು ಹೇಳಿದ್ದೇನು? “ನರಜನ್ಮದವರ ಮಧ್ಯೆ ವಾಸಿಸದ ದೇವರುಗಳೇ ಹೊರತು ಇನ್ನಾರೂ ರಾಜನ ಸಮ್ಮುಖದಲ್ಲಿ ತಿಳಿಸಲಾರರು” ಎಂದರು (ದಾನಿ.2:11). ದಾನಿಯೇಲನು, ಪೂರ್ಣರಾಜ್ಯದಲ್ಲಿನ ಎಲ್ಲಾ ಜೋಯಿಸರಿಗಿಂತಲೂ ಮಂತ್ರವಾದಿಗಳಿಗಿಂತಲೂ, ಶಾಸ್ತ್ರೀಯ ವಿದ್ಯೆಯ ಸರ್ವ ವಿಷಯಗಳಲ್ಲಿ ಹತ್ತರಷ್ಟು ನಿಪುಣನಾಗಿದ್ದನು.
 ದೇವಮಕ್ಕಳೇ, ಲೋಕದಲ್ಲಿ ಅನೇಕ ವಿಗ್ರಹದ ಆತ್ಮಗಳಿದ್ದರೂ, ಕಣಿ ಹೇಳುವ ಆತ್ಮಗಳಿದ್ದರೂ, ಮಂತ್ರವಾದಿಗಳ ಮೂಲಕ ಇತರರ ಮೇಲೆ ಪ್ರೇರಿಸಲ್ಪಡುವ ದುರಾತ್ಮಗಳಿದ್ದರೂ, ದೇವರಾತ್ಮಕ್ಕೆ ಸಮಾನವಾದದ್ದು ಒಂದೂ ಇಲ್ಲ. ಕರ್ತನು ನಿಮ್ಮನ್ನು ತನ್ನ ಆತ್ಮದಿಂದ ತುಂಬಿಸಲಿ. ಗೂಡಾರ್ಥಗಳನ್ನು ಗೋಚರಪಡಿಸಲು ಸಹಾಯಮಾಡಲಿ.

Spread the love

Pastor. Salomon

Pastor. Salomon

Leave a Reply

Your email address will not be published. Required fields are marked *

Top
%d bloggers like this: