ಇಂಥ ಕಾಲದಲ್ಲಿ ವಿವೇಕಿಯು ಸುಮ್ಮನಿರುವನು.

(ಆಮೋಸ.5:13).

ವಾಕ್ಚಾತುರ್ಯ ಕರ್ತನ ವರದಾನ. ಅದಕ್ಕಾಗಿ ಯಾವಾಗಲೂ ಮಾತಾಡುತ್ತಲೇ ಇರಬೇಕೆಂದು ಅರ್ಥವಲ್ಲ. ದೇವರಮಕ್ಕಳು ಯಾವಾಗ ಮಾತಾಡಬೇಕು, ಯಾವಾಗ ಮಾತಾಡಬಾರದೆಂದು ತಿಳಿದುಕೊಳ್ಳಬೇಕು. ‘ಸುಮ್ಮನಿರುವ ಸಮಯ, ಮಾತನಾಡುವ ಸಮಯ’ ಎಂದು ಜ್ಞಾನಿಯು ಹೇಳುತ್ತಾನೆ (ಪ್ರಸ.3:7). ಕೆಲವರು ಬಹಿರಂಗವಾಗಿ ಮೌನವಾಗಿದ್ದರೂ ಮನಸ್ಸಿನಲ್ಲೇ ಗೊಂದಲದಲ್ಲಿರುತ್ತಾರೆ. ಎಲ್ಲಿ ಜ್ವಾಲಾಮುಖಿಯು ಸಿಡಿಯುತ್ತದೋ ಎಂದು ಬೇರೆಯವರು ಭಯಪಡುತ್ತಾರೆ. ಮುಖ ತಿರುಗಿಸುವ ಮೌನ, ಹೇಡಿತನದ ಮೌನ, ತೃಪ್ತಿಯಾದ ಮೌನ, ತಪ್ಪು ಹೊರಿಸಿಕೊಳ್ಳುವ ಮೌನ, ಇವೆಲ್ಲವೂ ಬೇಕಾಗಿರದ ಮೌನ. ಆದರೆ ಅದೇ ಸಮಯದಲ್ಲಿ ಪರಿಶುದ್ಧವಾದ, ದೈವೀಕವಾದ, ಶಾಂತವಾದ ಮೌನಗಳೂ ಉಂಟು. ದೇವಮಕ್ಕಳೇ, ನಾಲಿಗೆಯನ್ನು ಅಡಗಿಸಿ ಮೌನವನ್ನು ಹಿಂಬಾಲಿಸಲು ಸಮಯವನ್ನು ಪ್ರತ್ಯೇಕಿಸಿ. ಮೌನವಾಗಿರುವದಾದರೆ ಅನೇಕ ಪಾಪಗಳಿಂದ ತಪ್ಪಿಸಿಕೊಳ್ಳಲು ಸಹಾಯಕವಾಗುತ್ತದೆ. ಮೌನವನ್ನು ನಾವು ಕಲಿತುಕೊಳ್ಳುವಾಗ ಕೋಪವನ್ನು ಎಬ್ಬಿಸಿ ಮನಸ್ಸಿಗೆ ಗಾಯವನ್ನುಂಟುಮಾಡುವ ಮಾತುಗಳನ್ನು ಮಾತಾಡದೆ ಇರಲು ಸಾಧ್ಯವಾಗುತ್ತದೆ (ಜ್ಞಾನೋ.15:1).

“ಯೆಹೋವನು ತನ್ನ ಪರಿಶುದ್ಧ ನಿವಾಸದಿಂದ ಎದ್ದು ಹೊರಟಿದ್ದಾನೆ; ನರಪ್ರಾಣಿಗಳೇ, ನೀವೆಲ್ಲಾ ಆತನ ಮುಂದೆ ಮೌನವಾಗಿರಿ.” (ಜೆಕ.2:13).

ಒಂದು ಸಲ ಒಬ್ಬ ಬೋಧಕರು ಬೀದಿಯಲ್ಲಿ ಹೋಗುತ್ತಿರುವಾಗ ಬೀದಿ ಕೊಳಾಯಿಯ ಬಳಿ ಇಬ್ಬರು ಹೆಂಗಸರು ಜಗಳವಾಡುತ್ತಿದ್ದರು. ಇಬ್ಬರೂ ತಮ್ಮ ಕೈಯಲ್ಲಿ ಕೊಡವನ್ನು ಹಿಡಿದಿದ್ದರು. ಇಬ್ಬರಿಗೂ ಮಾತಿನಲ್ಲಿ ಜೋರಾಗಿ ಜಗಳವಾಯಿತು. ಒಬ್ಬರಿಗೊಬ್ಬರು ಬಿರುಸಿನಿಂದ ಮಾತಾಡುವದನ್ನು ಬೋಧಕರು ನೋಡುತ್ತಿದ್ದರು. ಆದರೆ ತಟ್ಟನೆ ಒಬ್ಬಳು ಮಾತಾಡುವದನ್ನು ನಿಲ್ಲಿಸಿದಳು. ಆದರೆ ಇನ್ನೊಬ್ಬಳು ಮಾತಾಡುತ್ತಲೇ ಇದ್ದಳು. ಮೊದಲನೆಯವಳು ಸುಮ್ಮನಾದದ್ದನ್ನು ನೋಡಿದ ಇನ್ನೊಬ್ಬ ಹೆಂಗಸು ತನ್ನ ಸಂಗಡ ಇವಳು ಜಗಳವಾಡಲಿಲ್ಲ ಎಂಬ ಆತುರದಿಂದ ತನ್ನ ಬಿಂದಿಗೆಯನ್ನು ಕೆಳಗೆಹಾಕಿ, ಜೋರಾಗಿ ನಡೆದು ಬಂದು “ನಾನು ಇಷ್ಟೊಂದು ಮಾತಾಡುತ್ತಿದ್ದೇನೆ. ನೀನು ಏನಾದರೂ ಮಾತಾಡಿ ತೊಲಗು. ಅದರಿಂದ ನಾನು ಇನ್ನೂ ಹೆಚ್ಚಾಗಿ ಏನಾದರೂ ಮಾತಾಡಲು ಸಾಧ್ಯವಾದೀತು.” ಎಂದು ಜೋರಾಗಿ ಕಿರುಚಿದಳು. ಅನೇಕ ವೇಳೆಗಳಲ್ಲಿ ಮೌನವು ಸಾಧನವಾಗಿರುತ್ತದೆ. ಹೌದು, ಮೌನವು ಆಶೀರ್ವಾದವಾದದ್ದು. ಯೆರಿಕೋ ಬೆಟ್ಟವು ಬೀಳಲು ಮೌನವಾಗಿ ಆರು ದಿನಗಳು ಅವರು ಯೆರಿಕೋ ಕೋಟೆಯನ್ನು ಸುತ್ತಬೇಕೆಂದು ಯೆಹೋಶುವನು ಆಜ್ಞೆ ಮಾಡಿದ್ದನು. ಆ ದಿನಗಳು ಮೌನವೂ ಏಳನೇ ದಿನದಲ್ಲಿ ಸ್ತುತಿಯೂ ಆ ದೊಡ್ಡ ಕೋಟೆಯನ್ನು ಬೀಳಿಸಲು, ನೆಲಸಮ ಮಾಡಲು ಸಹಾಯಕವಾಗಿದ್ದಿತು.

Spread the love

Pastor. Salomon

Pastor. Salomon

Leave a Reply

Your email address will not be published. Required fields are marked *

Top
%d bloggers like this: