ಗರ್ವದಿಂದ ಭಂಗ; ಉಬ್ಬಿನಿಂದ ದೊಬ್ಬು

(ಜ್ಞಾನೋ.16:18).

ಹಾಗರಳು ಒಬ್ಬ ದಾಸಿ. ಮನೆಕೆಲಸವನ್ನು ಮಾಡಲು ಸಾರಳು ಈ ದಾಸಿಯನ್ನು ಇಟ್ಟುಕೊಂಡಿದ್ದಳು. ಹಾಗರಳು ಸಾರಳ ದಾಸಿಯಾಗಿ ಅನೇಕ ವರ್ಷಗಳಿದ್ದ ನಂತರ ಸಾರಳು ತನ್ನ ದಾಸಿಯಾದ ಹಾಗರಳನ್ನು ಅಬ್ರಹಾಮನಿಗೆ ಕೊಟ್ಟು ಒಂದು ವೇಳೆ ಇವಳಿಂದ ನಮ್ಮ ಸಂತತಿಯು ಮುಂದುವರೆಯುವದು. ಕರ್ತನು ನನ್ನ ಗರ್ಭವನ್ನು ಮುಚ್ಚಿದ್ದರಿಂದ ಇವಳಿಂದ ನನ್ನ ಕುಟುಂಬವು ಕಟ್ಟಲ್ಪಡುವದೆಂದು ಹೇಳಿದಳು. ಅಬ್ರಹಾಮನು ಸಾರಳ ಮಾತನ್ನು ಕೇಳಿದನು. ಹಾಗರಳು ಗರ್ಭಧರಿಸಿದಾಗ, ಅವಳು ಅಹಂಕಾರದಿಂದ ತನ್ನ ಯಜಮಾನಿಯನ್ನು ಕೀಳಾಗಿ ಎಣಿಸಿದಳು. ಆಗ ಸಾರಲು ತನ್ನ ದಾಸಿಯ ವರ್ತನೆಯಿಂದ ಆಕೆಯನ್ನು ಕಠಿಣವಾಗಿ ನಡಿಸಿದಳು. ಆದ್ದರಿಂದ ಹಾಗರಳು ಮನೆ ಬಿಟ್ಟು ಓಡಿಹೋಗಿ ಅರಣ್ಯದಲ್ಲಿ ಅಳಲು ಪ್ರಾರಂಭಿಸಿದಳು. ಅಬ್ರಹಾಮನ ಮನೆಯಲ್ಲಿ ಎಷ್ಟು ಚೆನ್ನಾಗಿತ್ತು. ಯಾಕೆ ಅವಳು ಅಲೆಯಬೇಕು? ಯಾಕೆ ಅವಳು ಕಣ್ಣೀರು ಸುರಿಸಬೇಕು?

“ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆಗಲಾತನು ನಿಮ್ಮನ್ನು ಮೇಲಕ್ಕೆ ತರುವನು.” (ಯಾಕೋ.4:10).

ಕರ್ತನು ಆಶೀರ್ವದಿಸುವಾಗ ನಾವೂ ಸಹ ನಮ್ಮನ್ನು ತಗ್ಗಿಸಿಕೊಂಡು ಆತನಿಗೆ ಒಪ್ಪಿಸಿಕೊಡಬೇಕು. ಕೆಲವರು ರಕ್ಷಣೆ ಹೊಂದುವಾಗ ಕರ್ತನು ಅವರಿಗೆ ಕೆಲವು ಸ್ವಪ್ನಗಳನ್ನೂ, ದರ್ಶನಗಳನ್ನೂ, ಪ್ರವಾದನೆಯ ವರಗಳನ್ನೂ ಕೊಡುವದುಂಟು. ವರಗಳನ್ನು ಹೊಂದಿದ ತಕ್ಷಣ ಅವರು ಹೆಮ್ಮೆಯಿಂದ ಅನೇಕ ವರ್ಷಗಳವರೆಗೆ ತ್ಯಾಗದಿಂದ ಸೇವೆ ಮಾಡಿದ ಸೇವಕರನ್ನೂ ಸಹ ಕೀಳಾಗಿ ಮಾತಾಡುವರು. ಸತ್ಯವೇದದ ವಾಕ್ಯಗಳಿಗೆ ಮುಖ್ಯತ್ವವನ್ನು ಕೊಡುವದಕ್ಕಿಂತ ತಮ್ಮ ಅನುಭವಗಳಿಗೆ ಮುಖ್ಯತ್ವವನ್ನು ಕೊಟ್ಟು ಕೊನೆಗೆ ಕೃಪೆಯಿಂದ ಬಿದ್ದುಹೋಗುವರು. ಕರ್ತನು ಬೀಳಾಮನು ಬೇರೆ ಜನಾಂಗದವನಾದರೂ ಅವನನ್ನು ಆಶೀರ್ವದಿಸಿ ಪ್ರವಾದನೆಯ ವರವನ್ನು ಕೊಟ್ಟು, ಹೆಚ್ಚಿಸಿ, ಮಹಿಮೆ ಪಡಿಸಿದನು. ಆದರೆ ಅವನು ಮಾಡಿದ್ದು ಏನು? ಕೂಲಿಗಾಗಿ ಇಸ್ರಾಯೇಲ್ಯರನ್ನು ಶಪಿಸಲು ಮುಂದೆ ಬಂದನು. ಇಸ್ರಾಯೇಲ್ಯರನ್ನು ಪಾಪಕ್ಕೆ ಒಳಪಡಿಸಲು ಅರಸನಿಗೆ ಬೀಳಾಮನು ರಹಸ್ಯವನ್ನು ಹೇಳಿಕೊಟ್ಟನು. ನೀತಿವಂತನಾಗಿ, ಮಹಿಮೆಯಾಗಿ ತನ್ನ ಓಟವನ್ನು ಮುಗಿಸಬೇಕಾಯಿತು ದರೆ ಅವನು ಕೊನೆಯಲ್ಲಿ ದೇವರಿಂದ ದೂರವಾಗಿ ಸಾಯಬೇಕಾಯಿತು.

ಅಬ್ಷಾಲೋಮನ ಕುರಿತಾಗಿ ಸತ್ಯವೇದದಲ್ಲಿ ಓದಿನೋಡಿ. ಅವನ ಮಾತು ಆ ದಿನಗಳಲ್ಲಿ ವೇದವಾಕ್ಯದಂತೆ ಇತ್ತು ಎಂದು ಸತ್ಯವೇದವು ಹೇಳುತ್ತದೆ. ಆದರೆ ಅವನು ದೇವರು ಆರಿಸಿಕೊಂಡ ದಾವೀದನಿಗೆ ವಿರೋಧವಾಗಿ ಎದ್ದಿದ್ದರಿಂದ ಕರ್ತನು ಅಬ್ಷಾಲೋಮನ ಆಲೋಚನೆಯನ್ನು ನಾಶಮಾಡಿದನು. ಆತನು ನರಳಿ ನರಳಿ ಸತ್ತನು.

Spread the love

Pastor. Salomon

Pastor. Salomon

Leave a Reply

Your email address will not be published. Required fields are marked *

Top
%d bloggers like this: