(ಆಮೋಸ.5:13). ವಾಕ್ಚಾತುರ್ಯ ಕರ್ತನ ವರದಾನ. ಅದಕ್ಕಾಗಿ ಯಾವಾಗಲೂ ಮಾತಾಡುತ್ತಲೇ ಇರಬೇಕೆಂದು ಅರ್ಥವಲ್ಲ. ದೇವರಮಕ್ಕಳು ಯಾವಾಗ ಮಾತಾಡಬೇಕು, ಯಾವಾಗ ಮಾತಾಡಬಾರದೆಂದು ತಿಳಿದುಕೊಳ್ಳಬೇಕು. ‘ಸುಮ್ಮನಿರುವ ಸಮಯ, ಮಾತನಾಡುವ ಸಮಯ’ ಎಂದು ಜ್ಞಾನಿಯು ಹೇಳುತ್ತಾನೆ (ಪ್ರಸ.3:7). ಕೆಲವರು ಬಹಿರಂಗವಾಗಿ ಮೌನವಾಗಿದ್ದರೂ ಮನಸ್ಸಿನಲ್ಲೇ ಗೊಂದಲದಲ್ಲಿರುತ್ತಾರೆ. ಎಲ್ಲಿ ಜ್ವಾಲಾಮುಖಿಯು ಸಿಡಿಯುತ್ತದೋ ಎಂದು ಬೇರೆಯವರು ಭಯಪಡುತ್ತಾರೆ. ಮುಖ ತಿರುಗಿಸುವ ಮೌನ, ಹೇಡಿತನದ ಮೌನ, ತೃಪ್ತಿಯಾದ ಮೌನ, ತಪ್ಪು ಹೊರಿಸಿಕೊಳ್ಳುವ ಮೌನ, ಇವೆಲ್ಲವೂ ಬೇಕಾಗಿರದ ಮೌನ. ಆದರೆ ಅದೇ ಸಮಯದಲ್ಲಿ ಪರಿಶುದ್ಧವಾದ, ದೈವೀಕವಾದ, ಶಾಂತವಾದ ಮೌನಗಳೂ ಉಂಟು. […]

(ಜ್ಞಾನೋ.16:18). ಹಾಗರಳು ಒಬ್ಬ ದಾಸಿ. ಮನೆಕೆಲಸವನ್ನು ಮಾಡಲು ಸಾರಳು ಈ ದಾಸಿಯನ್ನು ಇಟ್ಟುಕೊಂಡಿದ್ದಳು. ಹಾಗರಳು ಸಾರಳ ದಾಸಿಯಾಗಿ ಅನೇಕ ವರ್ಷಗಳಿದ್ದ ನಂತರ ಸಾರಳು ತನ್ನ ದಾಸಿಯಾದ ಹಾಗರಳನ್ನು ಅಬ್ರಹಾಮನಿಗೆ ಕೊಟ್ಟು ಒಂದು ವೇಳೆ ಇವಳಿಂದ ನಮ್ಮ ಸಂತತಿಯು ಮುಂದುವರೆಯುವದು. ಕರ್ತನು ನನ್ನ ಗರ್ಭವನ್ನು ಮುಚ್ಚಿದ್ದರಿಂದ ಇವಳಿಂದ ನನ್ನ ಕುಟುಂಬವು ಕಟ್ಟಲ್ಪಡುವದೆಂದು ಹೇಳಿದಳು. ಅಬ್ರಹಾಮನು ಸಾರಳ ಮಾತನ್ನು ಕೇಳಿದನು. ಹಾಗರಳು ಗರ್ಭಧರಿಸಿದಾಗ, ಅವಳು ಅಹಂಕಾರದಿಂದ ತನ್ನ ಯಜಮಾನಿಯನ್ನು ಕೀಳಾಗಿ ಎಣಿಸಿದಳು. ಆಗ ಸಾರಲು ತನ್ನ ದಾಸಿಯ ವರ್ತನೆಯಿಂದ ಆಕೆಯನ್ನು […]

“ಫರೋಹನು ತನ್ನ ಪರಿವಾರದವರಿಗೆ -ಈತನಲ್ಲಿ ದೇವರ ಆತ್ಮ ಉಂಟಲ್ಲಾ; ಈತನಿಗಿಂತ ಯೋಗ್ಯನಾದ ಪುರುಷನು ನಮಗೆ ಸಿಕ್ಕಾನೇ ಎಂದು ಹೇಳಿ…” (ಆದಿ.41:38).  ಇದು ಪವಿತ್ರಾತ್ಮನ ಯುಗವಾಗಿದೆ. ಎಲ್ಲಾ ಮನುಷ್ಯರ ಮೇಲೂ ಆತನು ಸುರಿಯಲ್ಪಡುತ್ತಿದ್ದಾನೆ. ಆತ್ಮನ ವರಗಳನ್ನು ಕೊಡುತ್ತಿದ್ದಾನೆ. ಆತ್ಮನ ಫಲಗಳನ್ನು ಕೊಟ್ಟು ಕ್ರಿಸ್ತನ ಸ್ವಭಾವದಲ್ಲಿ ನಮ್ಮನ್ನು ಸಂಪೂರ್ಣರಾಗಿಸುತ್ತಿದ್ದಾರೆ. ಈಗ ನಾವು ಹಿಂಗಾರಿನ ಮಳೆಯ ದಿವಸದಲ್ಲಿ ಬಂದಿದ್ದೇವೆ. ತಂದೆಯಾದ ದೇವರು ಪರಲೋಕದಲ್ಲಿದ್ದಾನೆ. ಕ್ರಿಸ್ತನು ಮಹಿಮೆಯ ನಂಬಿಕೆಯಾಗಿ ನಿಮ್ಮೊಳಗೆ ವಾಸವಾಗಿದ್ದಾನೆ. ಮುಂಚೆ ಪರಲೋಕದಲ್ಲಿ ಏಳು ಅಗ್ನಿದೀಪಗಳಾಗಿ, ಸಿಂಹಾಸನದ ಮುಂದೆ ಉರಿಯುತ್ತಿದ್ದ ಏಳು […]

ಹೊಸ ಒಡಂಬಡಿಕೆಯಲ್ಲಿ ಸಿಮಯೋನನು ಶಿಶುವಾದ ಯೇಸುವನ್ನು ಕುರಿತು ಆತನು ಅನ್ಯದೇಶದವರಿಗೆ ಜ್ಞಾನೋದಯದ ಬೆಳಕು ಎಂದು ಕೊಂಡಾಡಿದ್ದಾನೆ (ಲೂಕನು 2:29-32). ಯೇಸು ಗ್ರೀಕರ ಪಟ್ಟಣವಾದ ಗೆರಸೇನದಲ್ಲಿ ದೆವ್ವಹಿಡಿದವನನ್ನು ಸ್ವಸಮಾಡಿ (ಮಾರ್ಕನು 5), ತೂರ್ ಸೀನ್ ಪ್ರಾಂತ್ಯಗಳಲ್ಲಿ ಕಿವುಡನನ್ನು ಗುಣಪಡಿಸಿ (ಮಾರ್ಕನು 7:31-37), ರೋಮಾಯ ಶತಾಧಿಪತಿಯ ಆಳನ್ನು ಸ್ವಸ್ಥ ಮಾಡುವುದರ (ಮತ್ತಾಯನು 85-13) ಮೂಲಕ ಯೆಹೂದ್ಯರಲ್ಲದವರ ಕಡೆಗೂ ತನ್ನ ಸಹಾಯ ಹಸ್ತವನ್ನು ಚಾಚಿದ್ದಾನೆ. ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಅಪೊಸ್ತಲರು ನಿರ್ಣಯಿಸಿದರು (ಅ. ಕೃ. […]

Top