ಹೊಸ ಒಡಂಬಡಿಕೆಯಲ್ಲಿ ಸಿಮಯೋನನು ಶಿಶುವಾದ ಯೇಸುವನ್ನು ಕುರಿತು ಆತನು ಅನ್ಯದೇಶದವರಿಗೆ ಜ್ಞಾನೋದಯದ ಬೆಳಕು ಎಂದು ಕೊಂಡಾಡಿದ್ದಾನೆ (ಲೂಕನು 2:29-32). ಯೇಸು ಗ್ರೀಕರ ಪಟ್ಟಣವಾದ ಗೆರಸೇನದಲ್ಲಿ ದೆವ್ವಹಿಡಿದವನನ್ನು ಸ್ವಸಮಾಡಿ (ಮಾರ್ಕನು 5), ತೂರ್ ಸೀನ್ ಪ್ರಾಂತ್ಯಗಳಲ್ಲಿ ಕಿವುಡನನ್ನು ಗುಣಪಡಿಸಿ (ಮಾರ್ಕನು 7:31-37), ರೋಮಾಯ ಶತಾಧಿಪತಿಯ ಆಳನ್ನು ಸ್ವಸ್ಥ ಮಾಡುವುದರ (ಮತ್ತಾಯನು 85-13) ಮೂಲಕ ಯೆಹೂದ್ಯರಲ್ಲದವರ ಕಡೆಗೂ ತನ್ನ ಸಹಾಯ ಹಸ್ತವನ್ನು ಚಾಚಿದ್ದಾನೆ. ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಅಪೊಸ್ತಲರು ನಿರ್ಣಯಿಸಿದರು (ಅ. ಕೃ. […]

Top